ಹೇಳಿ ಹೋಗು ಕಾರಣ
ಪ್ರೀತಿ ಎಂದರೆ ಏನೆಂಬುದನ್ನು ಆ ನಿನ್ನ ಕಣ್ಣುಗಳಲ್ಲಿ ಕಂಡೆ,
ಮುಸ್ಸಂಜೆಯ ಸವಿಯನು ನಿನ್ನೊಡನೆ ನಡೆದಾಗಲೇ ಅರಿತುಕೊಂಡೆ,
ಅ ನಿನ್ನ ಬೆರಳುಗಳಿಂದ ಸ್ಪರ್ಶದ ಮಧುರವನು ತಿಳಿದುಕೊಂಡೆ,
ಅ ನಿನ್ನ ನಗುವನ್ನು ಕಂಡು ದೇವರಿಗು ಕಿಚ್ಚು ಹತ್ತಿತೆಂದುಕೊಂಡೆ.

ನಾ ಕಣ್ಣು ಮುಚ್ಚಿದಾಗ ಆ ನಿನ್ನ ಮುಂಗುರುಳು ಪದೇ ಪದೇ ನನ್ನ ಎಚ್ಚರಿಸುತ್ತಿದೆ,
ಆ ನಿನ್ನ ಬೆಚ್ಚನೆಯ ಉಸಿರು ಕಾಶ್ಮೀರಕ್ಕೊದರು ನನ್ನ ಬೆವರಿಸುತ್ತಿದೆ,
ಆ ನಿನ್ನ ಎಡಬಿಡದ ಮಾತು ಅರ್ಥವಾಗದಿದ್ದರು ಇಂದು ಕೇಳಬೇಕೆನಿಸುತ್ತಿದೆ,
ಆ ನಿನ್ನ ಸನಿಹದಲಿ ಅದೇನಿತ್ತು ಎಂಬುದನ್ನು ಇಂದಿಗೂ ನಾ ಅರಿಯದಾದೆ,

ಪ್ರೀತಿಯ ಗಂಧ ಗಾಳಿಯು ಗೊತ್ತಿರದ ನನಗೆ,
ನನ್ನೆದೆಯಲಿ ಅದರ ಬೀಜ ಬಿತ್ತಿ ಮೊಳಕೆಯೊಡೆಯುವುದರೊಳಗೆ,
ಹೊರಟು ಹೋದೆ ನೀನು ನನಗರಿಯುವುದರೊಳಗೆ,
ಆ ಮೊಳಕೆ ಇಂದು ಹೆಮ್ಮರವಾಗಿದೆ ಕಾರಣ ತಿಳಿಯುವುದರೊಳಗೆ,

ನಿನ್ನೊಡನೆ ಕಳೆದ ಆ ರಾತ್ರಿಯೇ ಕೊನೆಯದಾಗುತ್ತೆಂದು ತಿಳಿದಿರಲಿಲ್ಲ,
ಆ ನಿನ್ನ ಕ್ಯೆಯಲ್ಲಿದ್ದ ಬಂಚಲು ಗುಲಾಬಿ ನಡುವಿನ ಮುಳ್ಳು ಕಾಣಿಸಲೇ ಇಲ್ಲ,
ಆ ನಿನ್ನ ಕಣ್ಣಲ್ಲಿದ್ದ ಕಂಬನಿಯ ನಿಜವಾದ ಅರ್ಥ ಇಂದಿಗೂ ದೊರಕಲೇ ಇಲ್ಲ,
ಇಂದಿಗೂ ಕಾಡುತ್ತಿರುವುದೊಂದೆ, ಏಕೆ ನೀ ಕೊನೆಗೂ ದೂರವಾದ ಕಾರಣ ತಿಳಿಸಲೇ ಇಲ್ಲ.

No comments:
Post a Comment