3.6.16

ಮೊದಲ ಮಳೆ



ನಲ್ಲೆಯ ಸೇರಲು
ಆತುರದಿ ಭುವಿಗಿಳಿದ ಮಳೆ,
ತಣ್ಣಗಾದಳಿಂದು
ಕಾದು ಕೆಂಪಾಗಿದ್ದ ಇಳೆ.

ನನ್ನ ಮೇಲೆ ಬಿದ್ದ ಹನಿ ಮಳೆಯೂ
ಕೆದಕುತ್ತಿತ್ತು ನನ್ನೆದೆಯ ಮೂಲೆ ಮೂಲೆ,
ನೀ ಎಷ್ಟೇ ಸುರಿದರೂ
ಅಳಿಸಲಾಗಲಿಲ್ಲ ನನ್ನವಳು ಬರೆದ ಓಲೆ.

ಅವಳ ನೆನಪಲ್ಲಿಂದು
ನಾ ನಡೆದೆ ಆಧುನಿಕ ಬಾರಿನೆಡೆಗೆ,
ಆದರೆ ನೀ ಕೊಂಡೊಯ್ದಿದ್ದು ಮಾತ್ರ
ಮೇಲ್ಛಾವಣಿ ಸೋರುತ್ತಿದ್ದ ಜೊಪಡಿಯೆಡೆಗೆ.