ಹೀಗೊಂದು ಪ್ರೇಮಕಥೆ
ಅಂದು
ಕೇಂದ್ರ ಸರ್ಕಾರಿ ನೌಕರರ ಮುಷ್ಕರವಿದ್ದ ಕಾರಣ ನಾ ಫ್ರಿಯಾಗಿದ್ದೆ. ಎಂದಿನಂತೆ ಸಂಜೆ ಬೀಚಿನೆಡೆಗೆ
ನಡೆದೆ. ಬೀಚಿನಲ್ಲಿ ಅಷ್ಟೇನೂ ಜನ ಜಂಗುಳಿ ಇರಲಿಲ್ಲ. ಹಾಗೆ ಸುಮ್ಮನೆ ಕಡಲ ಅಲೆಗಳ ಪಿಸುಮಾತನ್ನು ಆಲಿಸುತ್ತಾ
ಸುಮಾರು ಒಂದು ಕಿಲೋಮೀಟರನಷ್ಟು ದೂರ ನಡೆದೆ. ಆಗ ನನಗೆ ಕಣ್ಣಿಗೆ ಬಿದ್ದದ್ದು, ಅಲ್ಲಿದ್ದ ಅಂದಾಜು
ಇಪ್ಪತ್ತಾರರ ಪ್ರಾಯದ ವಿದೇಶಿ ಯುವಕ. ಒಂಟಿಯಾಗಿದ್ದ ಆತನನ್ನು ಮಾತನಾಡಿಸಿದೆ. ಹೀಗೆ ಮಾತನಾಡುವಾಗ
ಪ್ರೇಮಿಗಳ ದಿನದ ಪ್ರಸ್ತಾಪವಾಯಿತು. ಮಾತನಾಡುತ್ತಾ Hey, Peter tomorrow is Valentines day,
where is your Partner? ಎಂದೆ ಆತನ ಕಣ್ಣಿಂದ ಭಾಷ್ಪ ಜಿನುಗತೊಡಗಿತು. I am sorry man, what’s
happen? ಎಂದು ಭುಜದ ಮೇಲೆ ಕೈ ಇಟ್ಟು ಸಮಾಧಾನ ಮಾಡಲು ಯತ್ನಿಸಿದೆ. ಸ್ವಲ್ಪ ಸಾವರಿಸಿಕೊಂಡ ಆತ ಭಾವುಕನಾಗಿ
ಈ ಕೆಳಗಿನ ಸಾಲುಗಳನ್ನು ಇಂಗ್ಲೀಷಿನಲ್ಲಿ ಹೇಳಿದ. ಅದನ್ನು ನಾನಿಲ್ಲಿ ಕನ್ನಡೀಕರಿಸಿದ್ದೇನೆ.
ಪ್ರಿಯೆ,
ನನ್ನಯ ಬರುವಿಕೆಗಾಗಿಯೇ ಕಾದು ಕುಳಿತ ಆ ನಿನ್ನ ಕಣ್ಣುಗಳು,
ನಾ ಬಳಿ ಬಂದೊಡನೆ ಕೆಂಪೇರಿದ ಆ ನಿನ್ನ ನಯವಾದ ತುಟಿಗಳು,
ನನ್ನಯ ಸ್ಪರ್ಶದಿ ಏರುವ ಆ ನಿನ್ನ ಬಿಸಿ ಉಸಿರು,
ಸದಾ ಆ ನಿನ್ನ ಗುಳಿ ಕೆನ್ನೆಯ ಮೇಲೆ ಮೂಡುವ ಮುಗುಳ್ನಗು,
ಇದೆಲ್ಲದರ ನೆನಪಿದೆಯೇ ನಿನಗೆ? ಕಳೆದ ವರ್ಷದ ಪ್ರೇಮಿಗಳ ದಿನದಂದು, ಇದೇ ಜಾಗದಲ್ಲಿ ನೀ ನನಗಾಗಿ
ಕಾಯುತ್ತಾ ಕುಳಿತಿದ್ದೆ . ಇಂದು ನೀ ನನ್ನಿಂದ ದೂರಾಗಿ ಗಗನದಲಿ ತಾರೆಯಾಗಿ ಕುಳಿತಿದ್ದೀಯಾ, ನನ್ನ
ಮಾತ್ರ ಇಲ್ಲಿ ಒಂಟಿಯಾಗಿ ಬಿಟ್ಟು ಎಂದು ಕಣ್ಣೀರು ಹಾಕತೊಡಗಿದ.ಆಕೆಗೆ ಏನಾಯಿತೆಂದಾಗ, ತನ್ನ ಪ್ರೀತಿಯ
ಪ್ರಫೋಸಲ್ ಬಳಿಕ ಇಬ್ಬರು ನೇತ್ರಾಣಿಯಲ್ಲಿ ಡೈವಿಂಗ್ ಗೆ ತೆರಳಿದ ಸಂದರ್ಭ ಸಂಭವಿಸಿದ ಅವಘಡದಲ್ಲಿ ಆಕೆ
ಈ ಲೋಕದಿಂದ ಅಗಲಿದಳು. ಅವನ ಕಥೆಯನ್ನು ಕೇಳಿ ನನ್ನ ಮನಸ್ಸು ಮರುಗಿತು. ಪ್ರಿಯತಮೆಯನ್ನಗಲಿದ ಸಂಕಟ
ನನಗೂ ಗೊತ್ತಿತ್ತು. ನನ್ನಾಕೆ ನನ್ನಿಂದ ದೂರಾಗಿ ಎರಡು ವರ್ಷ ಕಳೆದರೂ, ಆಕೆಯ ನೆನಪು ಇನ್ನು ಮಾಸಿರಲಿಲ್ಲ.
ನಾನು ಅವನ ಕಂಬನಿಗೆ ಸಾಥ್ ನೀಡಿ ಹಿಂದಿರುಗಿದೆ.
ಪ್ರೀತಿಯ ಹಲವು ಮಜಲುಗಳನ್ನು ತಿಳಿಯಬೇಕಾದರೆ,
ಪ್ರೀತಿಯ ಕಡಲಿಗೆ ಧುಮುಕಲೇ ಬೇಕು. ಪ್ರೀತಿಯ ಭಾವನೆಗಳನ್ನು ಪದಗಳಲ್ಲಿ ಹಿಡಿದಿಡಲು ಅಸಾಧ್ಯ. ಸೋ ಮುಂದಿನ
ನಿರ್ಧಾರ ನಿಮ್ಮದು.
ಅದೇಲ್ಲಾ ಏನೇ ಇರಲಿ ಎಲ್ಲರಿಗೂ ಪ್ರೇಮಿಗಳ ದಿನದ ಶುಭಾಷಯಗಳು.
No comments:
Post a Comment