ನನ್ನ ಕಣ್ಣಿಗೆ ಅವಳನ್ನೇಕೆ ಕಾಣಿಸಿದೆ,
ಕಂಡರೂ, ಕಣ್ಣಲ್ಲೇಕೆ ಆಸೆಯ ತುಂಬಿಸಿದೆ,
ಅವಳಿಗೇಕೆ ಗುಳಿ ಕೆನ್ನೆಯನ್ನಿರಿಸಿದೆ,
ಇಟ್ಟರೂ, ಆ ಗುಳಿಯಲಿ ನನ್ನೇಕೆ ಬೀಳಿಸಿದೆ.
ಅವಳೆದೆಯಲಿ ನನಗಾಗಿ ಪ್ರೀತಿ ಚಿಗುರಿಸಿದೆ,
ಅದರೆ, ನನಗೆ ತಡವಾಗಿ ಅರಿವು ಮಾಡಿಸಿದೆ,
ಅಷ್ಟರಲ್ಲೇಕೆ ನನ್ನೀಂದವಳನ್ನು ದೂರ ಮಾಡಿಸಿದೆ,
ಅದರೂ, ನನ್ನ ಕಣ್ಣೀರಲ್ಲೇಕೆ ಅವಳನ್ನು ಇರಿಸಿದೆ.
ಆಕೆಯನ್ನು ಮರೆಯಲು ನಾ ಕುಡುಕನಾದೆ,
ಆದರೆ, ಆಕೆಯ ನೆನಪಲ್ಲಿಂದು ನಾ ಕವಿಯಾದೆ,
ಹೊಸ ಪ್ರೀತಿಗಾಗಿ ಮನಸ್ಸು ಚಾರಣ ಹೊರಟಿದೆ.
ಅದರೆ, ಆ ಚಾರಣದಲ್ಲಿ ಮತ್ತೇಕೆ ಅವಳನ್ನು ಎದುರಾಗಿಸಿದೆ.
ತಂಗಾಳಿಯಲಿ ಮುಂಗುರುಳು ಕೆನ್ನೆಗೆ ಮುತ್ತಿಡುತ್ತಿದೆ,
ಆದರೆ, ಆ ಮುತ್ತು ನನ್ನ ತಲೆಗೆ ಮತ್ತೇರಿಸುತ್ತಿದೆ,
ಆ ಕೆಂದುಟಿಯ ಮೇಲೆ ಕಿರು ನಗೆ ನೃತ್ಯ ಮಾಡುತಿದೆ,
ಆದರೆ, ಇದು ಕನಸೋ? ವಾಸ್ತವವೋ? ಮನಸ್ಸಿಗೆ ತಿಳಿಯದಾಗಿದೆ.


