ಬಾಳ ಪಯಣದ ಹಾದಿಯಲಿ
ಓಂದಿನ ಮುಸ್ಸಂಜೆ ವೇಳೆಯಲಿ
ನಾ ಸಾಗುತ್ತಿದ್ದೆ, ವೆಸ್ಪಾ ಸ್ಕೂಟಿಯಲಿ
ಆಗ ನೀ ಕಂಡೆ ಮೈಸೂರು ನಿಲ್ದಾಣದಲಿ.
ನೀ ಕುಣಿಯುತ್ತಿದ್ದೆ ತುಂತುರು ಮಳೆಯಲಿ
ಆಗ ಮೂಡಿತು ಪ್ರೇಮ ಎನ್ನೆದೆಯಲಿ
ಗುಲಾಬಿಗಾಗಿ ನಾ ತಡಕಾಡುತ್ತಿದ್ದೆ ಅಕ್ಕಪಕ್ಕದಲಿ
ಹೂವೇನೋ ಸಿಕ್ಕಿತು ಅದರೆ, ನೀ ಮಾಯವಾಗಿದ್ದೆ ಕ್ಷಣದಲಿ
ಇಂದು ಎಫ್. ಎಮ್ ಹಾಡಿನ ಗುಂಗಿನಲಿ
ಮತ್ತದೇ ತುಂತುರು ಮಳೆಯಲಿ
ನೆನೆಯುತ್ತಾ ನಾ ಸಾಗಿರುವೇ ಮೈಸೂರಲಿ
ನೀ ಸಿಗುವೇ ಎಂಬ ಗಾಢ ನಿರೀಕ್ಷೆಯಲಿ.