ಏಕಾಂತದಲ್ಲೊಮ್ಮೆ ಹಾಗೇ ಸುಮ್ಮನೆ!
ಏನೆಂದು ಬರೆಯಲಿ ನಾ
ಲೇಖನಿಗೆ ಪದಗಳೇ ಏಟುಕದಾಗಿದೆ.
ನೀ ಅಗಲಿದ ಕ್ಷಣದಿಂದಲೇ
ಮನವೇಕೋ ಪೂರ್ತಿ ಬರಿದಾಗಿದೆ.
ನೀನಿದ್ದಾಗಲೂ ನನ್ನೊಡನೆ
ಪದಗಳೇಕೋ ಲೇಖನಿಗೆ ಏಟುಕದಂತಾಗಿತ್ತು.
ಕಾರಣ, ಆ ನಿನ್ನ ಪ್ರತಿ ಉಸಿರು
ಮನವೆಂಬ ಬಲೂನಿನೊಳಗೆ ತುಂಬಿ ಹೋಗಿತ್ತು.
ಪ್ರ್ತೀತಿಯೆಂಬುದು ಕಡಲಲೆಗಳ
ಮೇಲಿಂದ ಬೀಸುವ ತಂಗಾಳಿಯೆಂದು ತಿಳಿದೆದ್ದೆ ಆಗ.
ಆದರೆ, ಈ ಪ್ರ್ತೀತಿಯು ಕಡಲಲೆಗಳ
ಮೇಲೆ ಆರ್ಭಟಿಸುವ ಬಿರುಗಾಳಿಯೆಂದು ತಿಳಿಯಿತು ಈಗ.
ನನ್ನಿಂದ ನೀ ಬಹು ದೂರಕೆ ಸಾಗಲು
ನಿನ್ನಯ ದೋಣಿಗೆ ಹುಟ್ಟು ಹಾಕಿದವರಾರೋ ನಾ ಅರಿಯದಾದೆ.
ನೀ ನನ್ನ ಕಣ್ಣಂಚಿನಿಂದ ಮರೆಯಾದಂತೆ
ಬೇಸಿಗೆಯಲಿ ಮೀನೊಂದು ಬಲೆಯಿಂದ ಮರಳ ಮೇಲೆ ಜಿಗಿದಂತಾಗಿದೆ.