28.11.14
2.9.14
9.7.14
ಭೂತದಲ್ಲೋಮ್ಮೆ ಇಣುಕಿ ನೋಡಿದಾಗ
ಭೂತದಲ್ಲೋಮ್ಮೆ ಇಣುಕಿ ನೋಡಿದಾಗ
ಮತ್ತೆ ಕಣ್ಣೇದುರು, ಕಳೆದ
ಆ ಮಧುರ ನೆನಪುಗಳು.
ನಿನ್ನೋಂದಿಗೆ ಬೆರೆತ
ಆ ಸವಿ ಸವಿ ನೆನಪುಗಳು.
ಮಾಗಿಯ ಚಳಿಯಲಿ ಬೀಸಿದ ತಂಗಾಳಿಗೆ
ಮುತ್ತಿಡುತ್ತಿದ್ದ ಆ ನಿನ್ನ ಮುಂಗುರುಳು.
ನನ್ನಯ ನಯನದಲಿ ತದೇಕಚಿತ್ತದಿಂದ
ಅದೇನೋ ಹುಡುಕುತ್ತಿದ್ದ ಆ ನಿನ್ನ
ಕಣ್ಣ ನಡುಗಡ್ಡೆಗಳು.
ತುಂತುರು ಮಳೆಯಂತೆ ಎಡೆಬಿಡದೆ
ಮಾತನಾಡುತ್ತಿದ್ದ ಆ ನಿನ್ನ ತುಟಿಗಳು.
ಅಂಜಲೀ ಕಾರಿಕೆ ಗಿಡದಂತೆ ನಾಚಿ
ಮುದುಡುತ್ತಿದ್ದ ಆ ನಿನ್ನ ನಡುಗಲ್ಲಗಳು.
ನನ್ನಯ ಪಿಸು ಮಾತಿಗೆ ಹಿನ್ನಲೆ
ಸಂಗೀತ ನೀಡುತ್ತಿದ್ದ ಆ ನಿನ್ನ
ಕಿವಿಯೋಲೆಗಳು.
ನನ್ನಯ ನಾಸಿಕದ ಬಿಸಿಯುಸಿರೆಗೆ
ಹಿರಿ ಹಿರಿ ಹಿಗ್ಗುವ ನಿನ್ನಯ
ಕರ್ಣಗಳು.
ಅಂದು ನಿನ್ನನಗಲುವ ಸಮಯದಲಿ
ತೇವಗೊಂಡಿತ್ತು ನನ್ನೀ ಕಣ್ಣುಗಳು.
ಮತೈದು ವರುಷದ ಬಳಿಕವೂ ತೇವಗೊಳಿಸಿದೆ
ನಿನ್ನೊಡನಿದ್ದ ಆ ಸವಿ ಸವಿ ನೆನಪುಗಳು.
3.6.14
25.2.14
ಮಾಡರ್ನ್ ಪೋಸ್ಟ್
ಮಾಡರ್ನ್ ಪೋಸ್ಟ್
This article published at Kannada Prabha on 25/02/2014
ಸಿಓಡಿ ಕೂಡ ಲಭ್ಯ!
ಭಾರತೀಯ ಅಂಚೆ ಇಲಾಖೆ ಇತ್ತೀಚಿನ ದಿನಗಳಲ್ಲಿ ಹಲವು ಬದಲಾವಣೆಗೆ ತೆರೆದುಕೊಂಡಿದೆ. ಅದರಲ್ಲಿ ಪಾರ್ಸೆಲ್ ಸೇವೆಯೂ ಒಂದು. ಅದಕ್ಕೆ ಪೂರಕವಾಗಿ 'ಬಿಸಿನೆಸ್ ಪಾರ್ಸೆಲ್ ಸೇವೆ' ಆರಂಭಿಸಿದೆ. ಈ ಸೇವೆಯ ಮೂಲಕ ಪಾರ್ಸೆಲ್ ಸೇವೆ ಇ-ಮಾರುಕಟ್ಟೆ ವಹಿವಾಟಿಗೆ ಕಾಲಿಟ್ಟಿದೆ. ಅತಿ ಕಡಿಮೆ ದರದಲ್ಲಿ ಸೇವೆಯನ್ನು ನೀಡುವ ಜೊತೆಗೆ ಪ್ರತಿ ಹಂತದ ಟ್ರ್ಯಾಕಿಂಗ್ ಸೌಲಭ್ಯ ನೀಡಲು ಇಲಾಖೆ ಮುಂದಾಗಿದೆ. ಸಿ.ಓ.ಡಿ (ಕ್ಯಾಶ್ ಆನ್ ಡೆಲಿವರಿ) ಸೌಲಭ್ಯವೂ ಇದೆ.
ಈ ಸೇವೆಯಿಂದ ಬಲ್ಕ್ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಈ ಹಿಂದೆ ಸಾಧಾರಣ ಪಾರ್ಸೆಲ್ ಹಾಗೂ ನೋಂದಾಯಿತ ಪಾರ್ಸೆಲ್ ಸೇವೆಯಲ್ಲಿ ಕನಿಷ್ಠ 4 ಕೆ.ಜಿ. ಯಿಂದ ಗರಿಷ್ಠ 20 ಕೆ.ಜಿ. ವರೆಗೆ ಪಾರ್ಸೆಲ್ ಬುಕ್ ಮಾಡಬಹುದಿತ್ತು.
ಈ ಹೊಸ ಸೇವೆಯಲ್ಲಿ 2 ಕೆ.ಜಿ. ಯಿಂದ 35 ಕೆ.ಜಿ ಯವರೆಗೆ ಪಾರ್ಸೆಲ್ ಬುಕ್ ಮಾಡಬಹುದು. ಭಾರತದಾದ್ಯಂತ ಈ ಸೇವೆ ಲಭ್ಯವಿದೆ. ಈ ಸೇವೆಯಲ್ಲಿ ಪಾರ್ಸೆಲ್ ಎಷ್ಟೇ ತೂಕದ್ದಾಗಿದ್ದರೂ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಕಾರ್ಪೊರೇಟ್ ಗ್ರಾಹಕರಿದ್ದರೆ ಪಾರ್ಸೆಲ್ ಅನ್ನು ಅವರ ಸ್ಥಳದಿಂದಲೇ ಪಿಕ್‌ಅಪ್ ಮಾಡುವ ಸೌಲಭ್ಯವಿದೆ. ಈ ಗ್ರಾಹಕರು ಹಣವನ್ನು ಮುಂಗಡವಾಗಿ ಪಾವತಿ ಮಾಡಬಹುದು ಇಲ್ಲವೇ ಬುಕಿಂಗ್ ವೇಳೆ ನೀಡಬಹುದು. ಇವರಿಗಾಗಿ ಕ್ರೆಡಿಟ್ ಸೌಲಭ್ಯ ಸಿಗುತ್ತದೆ. ಕಾರ್ಪೊರೇಟ್ ಗ್ರಾಹಕರ ಗುಣವನ್ನರಿತ ಇಲಾಖೆಯು ಹೆಚ್ಚಿನ ಮೊತ್ತದ ಸರಕುಗಳ ಪಾರ್ಸೆಲ್ ಹಸ್ತಾಂತರಿಸುವ ವೇಳೆ ಹಣ ವಸೂಲಾತಿ ಮಾಡಲಾಗುತ್ತದೆ. ಇದನ್ನೇ ಸಿ.ಓ.ಡಿ (ಕ್ಯಾಶ್ ಆನ್ ಡೆಲಿವರಿ) ಸೇವೆ ಎಂದು ಕರೆಯಲಾಗುತ್ತದೆ. ಸುಮಾರು ರು. 50,000 ದವರೆಗೆ ಈ ಸೌಲಭ್ಯ ಲಭ್ಯವಿದೆ.
ಬಿಸಿನೆಸ್ ಪಾರ್ಸೆಲ್‌ಗೆ ಗ್ರಾಹಕರು 2 ಕೆಜಿಗೆ 45 ರಿಂದ 115, ನಂತರದ 1 ರಿಂದ 5 ಕೆ.ಜಿ.ಗೆ 12-30, ನಂತರದ ಪ್ರತಿ ಒಂದು ಕೆ.ಜಿ.ಗೆ 4 ರಿಂದ 32 ನೀಡಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ ಸ್ಥಳೀಯ ಅಂಚೆ ಕಚೇರಿಗೆ ಭೇಟಿ ಕೊಡಿ. ಇಲ್ಲದಿದ್ದರೆ www.indiapost.gov.in ಲಾಗಿನ್ ಆಗಬೇಕು.
18.2.14
ಅಂಚೆ ಮಿಂಚು
ಅಂಚೆ ಮಿಂಚು
This article Published at Kannada Prabha on 18 Feb 2014
ಸಣ್ಣ ಉಳಿತಾಯದಲ್ಲಿ ಬಹಳ ಹಿಂದಿನಿಂದಲೂ ಭಾರತೀಯ ಅರ್ಥ ವ್ಯವಸ್ಥೆಗೆ ತನ್ನದೇ
ಕಾಣಿಕೆಯನ್ನು ಅಂಚೆ ಇಲಾಖೆ ನೀಡುತ್ತಿದೆ. ಆಧುನಿಕ ಯುಗದ ಪೈಪೋಟಿಯ ಭರಾಟೆಯಲ್ಲಿ ಗ್ರಾಹಕರು ಅಂಚೆ
ಇಲಾಖೆಗಿಂತ ಷೇರು, ರಿಯಲ್ ಎಸ್ಟೇಟ್ ಹಾಗೂ ಇನ್ನಿತರ ಹಣಕಾಸು ಸಂಸ್ಥೆಗಳೆಡೆಗೆ
ಆಕರ್ಷಿತರಾಗುತ್ತಿದ್ದಾರೆ. ಕೆಲವರು ಆಧಿಕ ಬಡ್ಡಿ ಪಡೆಯಲು ಹೋಗಿ ಮೋಸ ಹೋಗಿದ್ದಾರೆ. ಅಂಚೆ
ಇಲಾಖೆಯಲ್ಲಿಯೇ ತುಸು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿದಲ್ಲಿ ಅಧಿಕ ಬಡ್ಡಿ ಪಡೆಯಬಹುದು. ಅಂಚೆ
ಇಲಾಖೆಯ ಮಂತ್ಲಿ ಇನ್‌ಕಂ ಸ್ಕೀಮ್ ಹಾಗೂ
ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಇವುಗಳ ಮೂಲಕ ಆಧಿಕ
ಬಡ್ಡಿ ಗಳಿಸಬಹುದು.
ಮಂತ್ಲಿ ಇನ್‌ಕಂ ಸ್ಕೀಮ್
ಈ ಖಾತೆಯು ಐದು ವರ್ಷಗಳ ಅವಧಿಯದ್ದಾಗಿರುತ್ತದೆ. ಪ್ರಸ್ತುತ ಇದರ ಬಡ್ಡಿ ದರ
ಶೇ.8.4. ಒಬ್ಬರು ಕನಿಷ್ಠ 1, 500- ಗರಿಷ್ಠ 4,50,000 ಹೂಡಿಕೆ ಮಾಡಬಹುದು. ಜಂಟಿ ಖಾತೆಯಾದಲ್ಲಿ
9,00,000 ದವರೆಗೆ ಹೂಡಿಕೆ ಮಾಡಬಹುದು. ಈ ಖಾತೆಯಿಂದ ನೀವು ಹೂಡಿಕೆ ಮಾಡಿದ ಹಣಕ್ಕೆ ಪ್ರತಿ
ತಿಂಗಳು ಬಡ್ಡಿ ಪಡೆಯುವಿರಿ. ಅದನ್ನು ನೀವು ಪಡೆಯದೆ, ಅದರ ಮೊತ್ತದಷ್ಟೇ 5 ವರ್ಷದ ಆರ್.ಡಿ.
ಡಿಪಾಸಿಟ್ ಮಾಡಿದಲ್ಲಿ ಶೇ.8.3ರಷ್ಟು ಬಡ್ಡಿ ಪಡೆಯಬಹುದು. ಈ ಎರಡು ಖಾತೆಗಳು ಒಟ್ಟಿಗೆ
ಮೆಚ್ಯುರಿಟಿಗೆ ಬರುತ್ತದೆ. ಇವರೆಡು ಖಾತೆಗಳಿಂದ ನೀವು ಹೂಡಿಕೆ ಮಾಡಿದ ಮೊತ್ತಕ್ಕೆ ಸರಾಸರಿ
ಶೇ.10.57 ಬಡ್ಡಿ ನಿರೀಕ್ಷಿಸಬಹುದು. ಆರ್. ಡಿ ಖಾತೆಗಾಗಿ ಹಣ ಜಮಾ ಮಾಡಲು ನೀವು ಪ್ರತಿ ತಿಂಗಳು
ಅಂಚೆ ಕಚೇರಿಗೆ ಹೋಗಬೇಕಿಲ್ಲ. ಎಂಎಸ್‌ಐ ಬಡ್ಡಿಯನ್ನು ನಿಮ್ಮ ಉಳಿತಾಯ ಖಾತೆಗೆ ಜಮಾ ಮಾಡಿ
ಅಲ್ಲಿಂದ ಆರ್.ಡಿ.ಗೆ ಜಮಾ ಮಾಡಲು ಒಂದು ಅರ್ಜಿ ನೀಡಿದರೆ ಸಾಕು. ನಿಮಗೆ ಸಮಯ ದೊರೆತಾಗ ಪಾಸ್‌ಪುಸ್ತಕಕ್ಕೆ
ಎಂಟ್ರಿ ಮಾಡಿಸಿಕೊಂಡು ಬರಬಹುದು.
ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್
ಈ ಖಾತೆಯನ್ನು ತೆರೆಯುವವರು 60 ವರ್ಷ ಮೇಲ್ಪಟ್ಟವರಾಗಿರಬೇಕು. ಖಾತೆಯ ಅವಧಿ ಐದು
ವರ್ಷ. ಪ್ರಸ್ತುತ ಇದರ ಬಡ್ಡಿ ಶೇ.9.2. ಕನಿಷ್ಠ 1,000 ದಿಂದ ಗರಿಷ್ಠ 15 ಲಕ್ಷ
ವರೆಗೆ ಹೂಡಿಕೆ ಮಾಡಬಹುದು. ಈ ಖಾತೆಯಿಂದ ನಿಮಗೆ ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ
ದೊರಕುವುದು. ಅದನ್ನು ನಿಮ್ಮ ಉಳಿತಾಯ ಖಾತೆಗೆ ವರ್ಗಾಯಿಸಿಕೊಳ್ಳಬಹುದು. ಮೂರು ತಿಂಗಳ ಮೊತ್ತವನ್ನು
ಮೂರರಿಂದ ಭಾಗಿಸಿ ಪ್ರತಿ ತಿಂಗಳು ಬರುವ ಮೊತ್ತ ಕಂಡುಕೊಳ್ಳಿ. ಆ ಮೊತ್ತವನ್ನು ಐದು ವರ್ಷ ಆರ್.ಡಿ
ಮಾಡಿ. ಎರಡು ಖಾತೆಗಳು ಮೆಚ್ಯುರಿಟಿಗೆ ಬಂದಲ್ಲಿ ನೀವು ಸರಾಸರಿಯಾಗಿ ಶೇ.11.56ರ ಬಡ್ಡಿದರ
ನೀರಿಕ್ಷಿಸಬಹುದು.
ಹಣ ಹೂಡಿಕೆ ಮಾಡಿ ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಇಚ್ಛಿಸದವರು ಈ ವಿಧಾನದಿಂದ
ಅಧಿಕ ಬಡ್ಡಿ ಪಡೆಯಬಹುದು. ಜೊತೆಗೆ ತಮ್ಮ ಬಂಡವಾಳದ ಬಗ್ಗೆ ಟೆನ್ಷನ್ ಮಾಡಿಕೊಳ್ಳದೆ
ನಿಶ್ಚಿಂತೆಯಿಂದ ಜೀವನ ಸಾಗಿಸಬಹುದು. ಹೀಗಿರುವಾಗ ಇನ್ನೇಕೆ ತಡ. ನಿಮ್ಮ ಸಮೀಪದ ಅಂಚೆ ಕಚೇರಿಗೆ
ದೌಡಾಯಿಸಿ!
14.2.14
ಹೀಗೊಂದು ಪ್ರೇಮಕಥೆ
ಹೀಗೊಂದು ಪ್ರೇಮಕಥೆ
ಅಂದು
ಕೇಂದ್ರ ಸರ್ಕಾರಿ ನೌಕರರ ಮುಷ್ಕರವಿದ್ದ ಕಾರಣ ನಾ ಫ್ರಿಯಾಗಿದ್ದೆ. ಎಂದಿನಂತೆ ಸಂಜೆ ಬೀಚಿನೆಡೆಗೆ
ನಡೆದೆ. ಬೀಚಿನಲ್ಲಿ ಅಷ್ಟೇನೂ ಜನ ಜಂಗುಳಿ ಇರಲಿಲ್ಲ. ಹಾಗೆ ಸುಮ್ಮನೆ ಕಡಲ ಅಲೆಗಳ ಪಿಸುಮಾತನ್ನು ಆಲಿಸುತ್ತಾ
ಸುಮಾರು ಒಂದು ಕಿಲೋಮೀಟರನಷ್ಟು ದೂರ ನಡೆದೆ. ಆಗ ನನಗೆ ಕಣ್ಣಿಗೆ ಬಿದ್ದದ್ದು, ಅಲ್ಲಿದ್ದ ಅಂದಾಜು
ಇಪ್ಪತ್ತಾರರ ಪ್ರಾಯದ ವಿದೇಶಿ ಯುವಕ. ಒಂಟಿಯಾಗಿದ್ದ ಆತನನ್ನು ಮಾತನಾಡಿಸಿದೆ. ಹೀಗೆ ಮಾತನಾಡುವಾಗ
ಪ್ರೇಮಿಗಳ ದಿನದ ಪ್ರಸ್ತಾಪವಾಯಿತು. ಮಾತನಾಡುತ್ತಾ Hey, Peter tomorrow is Valentines day,
where is your Partner? ಎಂದೆ ಆತನ ಕಣ್ಣಿಂದ ಭಾಷ್ಪ ಜಿನುಗತೊಡಗಿತು. I am sorry man, what’s
happen? ಎಂದು ಭುಜದ ಮೇಲೆ ಕೈ ಇಟ್ಟು ಸಮಾಧಾನ ಮಾಡಲು ಯತ್ನಿಸಿದೆ. ಸ್ವಲ್ಪ ಸಾವರಿಸಿಕೊಂಡ ಆತ ಭಾವುಕನಾಗಿ
ಈ ಕೆಳಗಿನ ಸಾಲುಗಳನ್ನು ಇಂಗ್ಲೀಷಿನಲ್ಲಿ ಹೇಳಿದ. ಅದನ್ನು ನಾನಿಲ್ಲಿ ಕನ್ನಡೀಕರಿಸಿದ್ದೇನೆ.
ಪ್ರಿಯೆ,
ನನ್ನಯ ಬರುವಿಕೆಗಾಗಿಯೇ ಕಾದು ಕುಳಿತ ಆ ನಿನ್ನ ಕಣ್ಣುಗಳು,
ನಾ ಬಳಿ ಬಂದೊಡನೆ ಕೆಂಪೇರಿದ ಆ ನಿನ್ನ ನಯವಾದ ತುಟಿಗಳು,
ನನ್ನಯ ಸ್ಪರ್ಶದಿ ಏರುವ ಆ ನಿನ್ನ ಬಿಸಿ ಉಸಿರು,
ಸದಾ ಆ ನಿನ್ನ ಗುಳಿ ಕೆನ್ನೆಯ ಮೇಲೆ ಮೂಡುವ ಮುಗುಳ್ನಗು,
ಇದೆಲ್ಲದರ ನೆನಪಿದೆಯೇ ನಿನಗೆ? ಕಳೆದ ವರ್ಷದ ಪ್ರೇಮಿಗಳ ದಿನದಂದು, ಇದೇ ಜಾಗದಲ್ಲಿ ನೀ ನನಗಾಗಿ
ಕಾಯುತ್ತಾ ಕುಳಿತಿದ್ದೆ . ಇಂದು ನೀ ನನ್ನಿಂದ ದೂರಾಗಿ ಗಗನದಲಿ ತಾರೆಯಾಗಿ ಕುಳಿತಿದ್ದೀಯಾ, ನನ್ನ
ಮಾತ್ರ ಇಲ್ಲಿ ಒಂಟಿಯಾಗಿ ಬಿಟ್ಟು ಎಂದು ಕಣ್ಣೀರು ಹಾಕತೊಡಗಿದ.ಆಕೆಗೆ ಏನಾಯಿತೆಂದಾಗ, ತನ್ನ ಪ್ರೀತಿಯ
ಪ್ರಫೋಸಲ್ ಬಳಿಕ ಇಬ್ಬರು ನೇತ್ರಾಣಿಯಲ್ಲಿ ಡೈವಿಂಗ್ ಗೆ ತೆರಳಿದ ಸಂದರ್ಭ ಸಂಭವಿಸಿದ ಅವಘಡದಲ್ಲಿ ಆಕೆ
ಈ ಲೋಕದಿಂದ ಅಗಲಿದಳು. ಅವನ ಕಥೆಯನ್ನು ಕೇಳಿ ನನ್ನ ಮನಸ್ಸು ಮರುಗಿತು. ಪ್ರಿಯತಮೆಯನ್ನಗಲಿದ ಸಂಕಟ
ನನಗೂ ಗೊತ್ತಿತ್ತು. ನನ್ನಾಕೆ ನನ್ನಿಂದ ದೂರಾಗಿ ಎರಡು ವರ್ಷ ಕಳೆದರೂ, ಆಕೆಯ ನೆನಪು ಇನ್ನು ಮಾಸಿರಲಿಲ್ಲ.
ನಾನು ಅವನ ಕಂಬನಿಗೆ ಸಾಥ್ ನೀಡಿ ಹಿಂದಿರುಗಿದೆ.
ಪ್ರೀತಿಯ ಹಲವು ಮಜಲುಗಳನ್ನು ತಿಳಿಯಬೇಕಾದರೆ,
ಪ್ರೀತಿಯ ಕಡಲಿಗೆ ಧುಮುಕಲೇ ಬೇಕು. ಪ್ರೀತಿಯ ಭಾವನೆಗಳನ್ನು ಪದಗಳಲ್ಲಿ ಹಿಡಿದಿಡಲು ಅಸಾಧ್ಯ. ಸೋ ಮುಂದಿನ
ನಿರ್ಧಾರ ನಿಮ್ಮದು.
ಅದೇಲ್ಲಾ ಏನೇ ಇರಲಿ ಎಲ್ಲರಿಗೂ ಪ್ರೇಮಿಗಳ ದಿನದ ಶುಭಾಷಯಗಳು.
6.1.14
ಖಾಲಿ ಮನಸ್ಸು
ಮನಸ್ಸೇಕೋ ಖಾಲಿಯಾಗಿತ್ತು. 'Empty mind is
always devils workshop' ಎಂಬುದು ನೆನಪಾಗಿ ಸುಮ್ಮನೆ ಬೀಚಿಗೆ ತೆರಳಿದೆ. ಬೀಚಿನ ತುಂಬೆಲ್ಲಾ ಜನರಿದ್ದರು ನಾ
ಒಂಟಿಯಾಗಿದ್ದೆ. ಮರಳ ಮೇಲೆ ಕುಳಿತು ಕಡಲ
ಅಲೆಗಳನ್ನ್ಫು ನೋಡುತ್ತಿದ್ದೆ. ಪಕ್ಕದಲ್ಲಿ ಪುಟ್ಟ ನಾಯಿ ಮರಿಯೊಂದು ಏನನ್ನೋ ಕಳೆದು
ಕೊಂಡು ಹುಡುಕುತ್ತಿತ್ತು. ಕೆಲವೊಮ್ಮ್ಫೆ ಕಡಲ ಅಲೆಗಳಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿತ್ತು. ಅದರೂ ಪುನಃ ಪುನಃ ಕಡಲಿಗೆ ಧಾವಿಸುತ್ತಿತ್ತು. ಅದ
ಕಂಡ ನನಗೆ ಕರುಣೆ ಉಕ್ಕಿ, ಅದನ್ನು ದಡದಿಂದ ಎತ್ತ್ತಿ ದೂರ ಬಿಡೋಣವೆಂದು ಹತ್ತಿರ ಸಾಗಿ ಮರಿಯನ್ನು ಕೈ
ಗೆ ಎತ್ತಿಕೊಂಡೆ. ತಕ್ಷಣ
ಅಲ್ಲೆ ದೂರದಲ್ಲಿದ್ದ ದೊಡ್ಡ
ನಾಯಿಯೊಂದು ನನ್ನ ಕಡೆಗೆ ನೋಡಿ ಬೋಗಳಲು ಪ್ರಾರಂಭಿಸಿತು. ಕ್ಷಣ
ಮಾತ್ರದಲ್ಲಿ ಕೈಯಲ್ಲಿದ್ದ ಮರಿಯನ್ನು ಕೆಳಗೆ ಬಿಟ್ಟೆ. ಅದು
ಓಡಿ ಹೋಗಿ ದೊಡ್ಡ ನಾಯಿಯ ಮಡಿಲು ಸೇರಿತು. ಆಗಲೇ
ಅರಿವಾದದ್ದು ಅದು ಅದರ ತಾಯಿಯೆಂದು. ಬದುಕಿದೆಯ ಬಡ ಜೀವವೇ ಎಂದು ನಾನು ಅಲ್ಲಿಂದ ಕಾಲ್ಕಿತ್ತೆ. ಆದರೆ
ಆ ನಾಯಿ ಈ ಹಾಳಾದ ಮನುಷ್ಯರು ನನ್ನ ಮಗನಿಗೆ ನೆಮ್ಮದಿಯಾಗಿ ಈಜು
ಕಲಿಸಲು ಬಿಡುವುದಿಲ್ಲವೆಂದು ಬೋಗಳಿಕೊಂಡು ಮುಂದೆ ಸಾಗಿತು.
Subscribe to:
Comments (Atom)

