22.11.11

ಧರೆ ಹೊತ್ತಿ ಉರಿದೊಡೆ ಜೀವ ಸಂಕುಲ ಸಾಗುವುದು ಎತ್ತ ಕಡೆಗೆ ?


ಧರೆ ಹೊತ್ತಿ ಉರಿದೊಡೆ ಜೀವ ಸಂಕುಲ ಸಾಗುವುದು ಎತ್ತ ಕಡೆಗೆ ?

ಅಬ್ಬಬ್ಬಾ …. ಏನಿದು? ಚಳಿಗಾಲದಲ್ಲಿ ಭಯಂಕರ ಸೆಕೆ, ಬೇಸಿಗೆಯಲ್ಲಿ ಅತಿವೃಷ್ಠಿ, ಮಳೆಗಾಲದಲ್ಲಿ ಅನಾವೃಷ್ಠಿ, ಪ್ರಕೃತಿ ಹೀಗೇಕೆ ಮುನಿಸಿಕೊಂಡಿದೆ?  ಹೀಗೆ ಮುಂದುವರೆದರೆ ಜೀವಸಂಕುಲದ ಗತಿಯೇನು?. ಮುಂದೊಮ್ಮೆ ಭೂ ಖಂಡದ ಮೇಲೆ ಜೀವಸಂಕುಲದ ಕುರುಹು ಇಲ್ಲದಂತಾದರೇ ಆಶ್ಚರ್ಯ ಪಡಬೇಕಾಗಿಲ್ಲ.

          ಇದಕ್ಕೆಲ್ಲಾ ಕಾರಣ ಒಂದೇ ಭೂಮಿ ಬಿಸಿಯಾಗಿದೆ. ಮಾನವ ಎಸಗುತ್ತಿರುವ ಕೃತ್ಯದಿಂದ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಇದರ ಪರಿಣಾಮ ಚಿತ್ರವ್ಯೆಚಿತ್ರ್ಯದ ಘಟನೆಗಳು ಸಂಭವಿಸುತ್ತಿದೆ. 2006 ರ ನಂತರದ ವರ್ಷಗಳಲ್ಲಿ ತಾಪಮಾನ ವಿಪರೀತವಾಗಿ ಏರತೊಡಗಿದೆ. ಈ ಜಾಗತಿಕ ತಾಪಮಾನ ಏರಲು ಕಾರಣ ವಾಯುಮಾಲಿನ್ಯ, ಅತಿಯಾದ cfc  ಕಿರಣಗಳ ಬಿಡುಗಡೆಯಿಂದ ozone ಪದರ ನಾಶವಾಗುವುದರ ಫಲಿತಾಂಶವೇ ಈ  ಹಸಿರು ಮನೆ ಪರಿಣಾಮ.  ಇದರಿಂದಾಗಿಯೇ ಭೂಮಿಯ ತಾಪಮಾನ ಹೆಚ್ಚಾಗುತ್ತಿದೆ.

ಈ ಏರುತ್ತಿರುವ ತಾಪಮಾನದ ಪರಿಣಾಮ ನಾವು ಈಗಾಗಲೇ ಕಂಡಿದ್ದೇವೆ, ಹಾಗೂ ಕಾಣುತ್ತಲೇ ಇದ್ದೇವೆ. ಅದರಲ್ಲಿ ಪ್ರಮುಖವಾದವುಗಳೆಂದರೆ Britain ನಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದ್ದು 1959 ರಲ್ಲಿ. ಆದರೆ ದಾಖಲೆ ಮುರಿದಿದ್ದು 2006 ರ ವರ್ಷ. ಈಗಾಗಲೇ ಯುರೋಪಿನ ಹಿಮಚ್ಚಾಧಿತ  ಪ್ರದೇಶಗಳಲ್ಲಿ ಹಿಮದ ಪ್ರಮಾಣ ವಿಪರೀತ ಕಡಿಮೆಯಾಗಿದೆ. ಇದರ ಪರಿಣಾಮ ಹಿಮಬೆಟ್ಟಗಳಲ್ಲಿ ಚಳಿಗಾಲದಲ್ಲಿಯೂ ಹೂ ಬೆಳೆದಿರುವುದನ್ನು ಕಾಣಬಹುದು. ಆಸ್ಟ್ರಿಯಾದಲ್ಲಿ 1300 ವರ್ಷಗಳ ಬಳಿಕ ಮೊದಲ ಬಾರಿಗೆ 2005 ರಲ್ಲಿ ಅತ್ಯಧಿಕ ತಾಪಮಾನ ಕಂಡುಬಂದಿದೆ. ಇದು ಯುರೋಪಿನ ಕಥೆಯಾದರೆ, ಅಮೆರಿಕಾದ ನ್ಯೂಯರ್ಕ್ ನಲ್ಲಿ ಸಾಮಾನ್ಯವಾಗಿ ಅತಿಹೆಚ್ಚು ಉಷ್ಣಾಂಶವೆಂದರೆ 4 ಡಿಗ್ರಿ ಸೆಲ್ಸಿಯಸ್, ಅದರೆ ಜನವರಿಯಲ್ಲಿ 18 ಡಿಗ್ರಿ ಸೆಲ್ಸಿಯಸ್. ಮಧ್ಯ ಅಮೆರಿಕಾದ ವೆನಿಜುವೆಲಾದಲ್ಲಿ 1972 ರ ವೇಳೆಗೆ 6 ನಿರ್ಗಲ್ಲುಗಳಿದ್ದವು. ಇಂದು ಕರಗದೆ ಉಳಿದಿರುವುದು 2 ಮಾತ್ರ. ಅವು ಸಹ ಹಿಂದಿನ ಗಾತ್ರದಷ್ಠಿಲ್ಲ. ಇನ್ನು ಐದರಿಂದ ಹತ್ತು ವರ್ಷಗಳಲ್ಲಿ ಅದು ಮಂಗಮಾಯ. ಇನ್ನು ಇಪ್ಪತ್ತು ವರ್ಷಗಳಲ್ಲಿ ಇಂಡೋನೆಷ್ಯಾದ ಎರಡು ಸಾವಿರ ದ್ವೀಪಗಳು ಮುಳಗಿ ಹೋಗಲಿರುವ ಸಂಭವಿದೆ. ಇದು ಹೀಗೆ ಮುಂದುವರೆದರೆ ಮುಂದೋಮ್ಮೆ ವಿಶ್ವ ಭೂಪಟದಲ್ಲಿ ಮಾರಿಷಸ್ ದೇಶವೇ ಕಾಣೀಯಾದರೆ ಆಶ್ಚರ್ಯಪಡಬೇಕಾಗಿಲ್ಲ.

ಇದನ್ನೆಲ್ಲಾ ನೋಡಿದಾಗ ನಿಮಗನ್ನಿಸಬಹುದು ಬಾರತಕ್ಕೆ ಏನು ಅಪಾಯವಿಲ್ಲ ಎಂದು ಕೊಂಡರೆ ಅದು ಶುದ್ದ ಮೂರ್ಖತನ. ಭಾರತದ ಮೂರನೇ ಒಂದು ಭಾಗ ಕಡಲ ತೀರ ಹೊಂದಿರುವ ನಮಗೆ ಇನ್ನು ಐದು ವರ್ಷಗಳಲ್ಲಿ 55 ರಿಂದ 60 ಇಂಚು ಭೂ ಭಾಗ ಸಮುದ್ರದೊಳಗೆ  ಮುಳುಗಿ ಹೋಗಲಿದೆ. ಕರಾವಳಿಯ ಪಶ್ಚಿಮ ಭಾಗಕ್ಕಿಂತ ಪೂರ್ವ ಭಾಗಕ್ಕೆ ಹೆಚ್ಚು ಹಾನಿ. ಹಿಮಾಲಯದ ಹಿಮ ಕರಗಿ ಬಂಗಾಳ ಕೊಲ್ಲಿಗೆ ಸೇರುವುದರಿಂದ ಕಡಲ ತೀರದ ಸುಂದರ ಬನ್ಸ್ ಗೆ ಹಾನಿಯಾಗುತ್ತೆ. ಹುಲಿಯ ಆಶ್ರಯ ತಾಣವಾಗಿರುವ ಈ ಕಾಡು ಮುಳುಗಿದರೆ ಏನಾಗಬಹುದು ನೀವೇ ಯೋಚಿಸಿ?. ಓರಿಸ್ಸಾದ ಕೇಂದ್ರಾಪುರ ಜಿಲ್ಲೆಯೇ ಮುಳುಗುವ ಸಂಭವ ಹೆಚ್ಚಿದೆಯೆಂದು ವಿಜ್ಞಾನಿಗಳೇ ಅಭಿಪ್ರಾಯಪಟ್ಟಿದ್ದಾರೆ. ಹಿಮಾಲಯ ಗಂಗೋತ್ರಿ ನೀರ್ಗಲ್ಲು ಪ್ರತಿ ವರ್ಷ 34 ಮೀಟರ್ ನಷ್ಟು ಕರಗುತ್ತಿರುವುದಾಗಿ ಭಾರತದ ಹವಾಮಾನ ಅಧಿಕಾರಿ ಶೃತಿಶುಕ್ಲಾ ಏಚ್ಚರಿಕೆ ನೀಡಿದ್ದಾರೆ. ಈ ಪ್ರಮಾಣ 1971 ರಲ್ಲಿ 19 ಮೀಟರ್ ನಷ್ಟಿತ್ತು. ಹೀಗಾದರೆ ಮುಂದೊಮ್ಮೆ ಗಂಗಾನದಿ ಬತ್ತಿ ಹೋಗುವ ಸಾಧ್ಯತೆ ಇದೆ. ಇದಲ್ಲದೇ ಅಷ್ಟರೊಳಗೆ ಸಮುದ್ರ ಉಕ್ಕೇರುವುದರಿಂದ ಗಂಗೆ ಹಿಮ್ಮುಖವಾಗಿ ಹರಿಯುವ ಸಾಧ್ಯತೆಯೂ ಇದೆ. ಪ್ರಕೃತಿ ವ್ಯೆಚಿತ್ರ್ಯ ಬಲ್ಲವರಾರು?

ಚಂಡಮಾರುತದ ಹಾವಳಿ, ಚೀನಾದ ರಾಜಧಾನಿ ಬೀಜಿಂಗ್ ಮತ್ತು ದುಬ್ಯೆನಲ್ಲಿ ಮೊದಲ ಬಾರಿಗೆ ಹಿಮಪಾತ, ಸಹರಾ ಮರುಭೂಮಿಯಲ್ಲಿ ವಿಪರೀತ ಮಳೆ, ಜಪಾನ್ ನ ಭೂ ನಡುಕ ಮತ್ತು ಸುನಾಮಿ ಇಂತಹ ಪ್ರಕೃತಿ ವಿಕೋಪದಿಂದ ಶೇ 70 ರಷ್ಟು ಆಹಾರ ಉತ್ಪಾದನೆ ಕುಸಿತಗೊಂಡಿದೆ. ಆರು ಲಕ್ಷಗಿಂತ ಹೆಚ್ಚಿನ ಜನರು ನಿರಾಶ್ರಿತರಾಗಿದ್ದಾರೆ.

2005 ರಲ್ಲಿಯೇ ವಿಶ್ವಸಂಸ್ಥೆ ಪ್ಯಾರಿಸ್ ನಲ್ಲಿ ನಿಯುಕ್ತಗೊಳಿಸಿದ್ದ 154 ದೇಶಗಳ 2500 ವಿಜ್ಞಾನಿಗಳ ತಂಡ ಸುದೀರ್ಘ ಸಮೀಕ್ಷೆ ನಡೆಸಿದ ಬಳಿಕ ಮುಂದೊದಗುವ ಭೀಕರ ಸಮಸ್ಯೆಯ ಮುನ್ಸೂಚನೆ ನೀಡಿದ್ದರೂ, ಯಾವ ದೇಶವು ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗದೇ ಇರದಿರುವುದು ಎಂತಹ ವಿಪರ್ಯಾಸ ಅಲ್ಲವೇ? ಇದೊಂದೆಡೆಯಾದರೆ ವಿಜ್ಞಾನಿಗಳು ಪೂರ್ಣ ಸತ್ಯಾಂಶ ಹೊರಗೆಡವದಂತೆ ಲಗಾಮು ಹಾಕುವಲ್ಲಿ ವಿಶ್ವದ ಶ್ರೀಮಂತ ದೇಶಗಳಾದ ಅಮೆರಿಕ, ಚೀನಾ ಹಾಗು ಇನ್ನಿತರ ಬಲಿಷ್ಠ ರಾಷ್ಟ್ರಗಳು ನಿರತವಾಗಿವೆ. ಏಕೆಂದರೆ ಏರುತ್ತಿರುವ ಜಾಗತಿಕ ತಾಪಮಾನದಲ್ಲಿ ಇವುಗಳ ಪಾಲೇ ಶೇ 80 ರಷ್ಟಿದೆ. ಹೀಗಿದ್ದು ಒಂದರಮೇಲೊಂದು ಇನ್ನೋಂದು ದೇಶವು ಗೂಬೆ ಕೂರಿಸುವ ವ್ಯರ್ಥ ಪ್ರಯತ್ನಕ್ಕೆ ನಿರತವಾಗಿರುವುದು ನಾಚಿಕೆಗೇಡಿನ ಕೆಲಸವಲ್ಲದೇ ಮತ್ತಿನ್ನೇನು?

ಹೀಗಿರುವಾಗ ನಾಗರಿಕರಾದ ನಾವುಗಳು ಏಚ್ಚೇತ್ತುಕೊಳ್ಳದೇ ಹೀಗೆ ಮೌನ ಮುಂದುವರಿಸಿದ್ದಾದರೆ ಮುಂದೊಂದು ದಿನ ನಮ್ಮ ಅಳಿವೆಗೆ ನಾವೇ ಕಾರಣಕರ್ತರಾಗುತ್ತೇವೆ.  ಇಲ್ಲವೇ ಇಡೀ ಭೂಮಂಡಲವನ್ನು ವಿನಾಶದ ಕೂಪಕ್ಕೆ ತಳ್ಳುವುದಂತು  ಖಚಿತ.