ನೀ ಕೊಲ್ಲಬೇಡ ನನ್ನ ಕೆಂಗಣ್ಣಿನಿಂದ ನೋಡಿ
ನಾ ಮಲಗುವೆ ನಿನಗೆ
ಕುಡಿದ ಕಾರಣ ನೀಡಿ
ನಿನ್ನೀ ಗುಳಿ ಕೆನ್ನೆಯ
ಚೆಲುವಿನ ಮೋಡಿ
ಅದ ಬಣ್ಣಿಸಲು ನಾ
ಪಾನ ಗೋಷ್ಠಿಯ ಹೂಡಿ
ಮಾರ್ಗ ಮದ್ಯದಲಿ
ಭರತನಾಟ್ಯವನ್ನಾಡಿ
ಮೈಯ ಮೇಲಿನ ಬಟ್ಟೆಯೆಲ್ಲಾ ರಾಡಿ
ಹೊತ್ತು ತಂದರು ಗೆಳೆಯರೆಲ್ಲಾ
ಕೂಡಿ
ಅಂತೂ ಕಂಡುಹಿಡಿದೆ
ಹಾಸಿಗೆ ತಡಕಾಡಿ
ನಿನ್ನೆದೆಯ ಮೇಲೆ
ನನ್ನ ಕೈ ಹರಿದಾಡಿ
ಒಂದೇ ಸಮನೆ ರಾತ್ರಿಯೆಲ್ಲಾ
ಬಡಿದಾಡಿ
ಮುಂಜಾನೆ ಇಬ್ಬರೂ
ಕೂಡಿ ಕಛೇರಿಗೆ ಹೋಗುವುದು ರೂಡಿ
ಗೆಳೆಯರೇ ಇದಕೆಲ್ಲ
ನೀವು ತಲೆಕೆಡಿಸಿಕೊಳ್ಳಬೇಡಿ.
No comments:
Post a Comment