2.4.16

ಓಲೆ

ಗೆಳತಿ,
ನೀ ಬಯಸಿದಂತೆ,
ಬರಿದಾದ ನಿನ್ನ ಮನದ ಸರೋವರಕೆ
ನಾ ಮಳೆಹನಿಯಾಗಿರುವೆ.
ನಿನ್ನೀ ಹೂ ಕಂಗಳಲಿ ತುಂಬಿರುವ ಸವಿ ಜೇನನ್ನು
ಹೀರುವ ದುಂಬಿ ನಾನಾಗಿರುವೆ.
ಈಗ ನನ್ನದೊಂದೆ ಕೋರಿಕೆ,
ಎನ್ನೆದೆಯಲಿ ಕವಿದ ಕಾರ್ಮೋಡಕೆ
ನೀ ಬೆಳ್ಳಿ ಕಿರಣವಾಗಬಾರದೇಕೆ?
ಕತ್ತಲು ಕವಿದ ನನ್ನ ಬಾಳ ಹಾದಿಗೆ
ನೀ ದಾರಿ ದೀಪವಾಗಬಾರದೇಕೆ?

No comments:

Post a Comment