27.11.16

ಹ್ಯಾಟ್ಸ್ ಆಫ್ ಫಿಡಲ್ ಕ್ಯಾಸ್ಟ್ರೋ . ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ.

ಗೆಳೆಯರೇ,
ಜಗತ್ತು ಕಂಡ ಮಹಾನ್ ಕ್ರಾಂತಿಕಾರಿ ಫಿಡಲ್ ಕ್ಯಾಸ್ಟ್ರೋ ಇನ್ನಿಲ್ಲ. ಜಗತ್ತಿನ ಹಲವು ದೇಶಗಳು ಅವರನ್ನು ಸರ್ವಾಧಿಕಾರಿ, ಕೊಲೆಗಡುಕ,ಕ್ರಾಂತಿಕಾರಿ,ಸಮಾಜವಾದಿ ಎಂದೆಲ್ಲಾ ಕರೆದರೂ, ಕ್ಯೂಬಾ ಜನರಿಗೆ ಮಾತ್ರ ಅವರು ಆರಾಧ್ಯ ದೇವರು. ಈ ಕ್ರಾಂತಿಕಾರಿ ಕ್ಯೂಬಾದ ಚುಕ್ಕಾಣಿ ಹಿಡಿಯುವಾಗ ಅದೊಂದು ಬಡ ರಾಷ್ಟ್ರ. ಈಗ ಕ್ಯೂಬಾ ಶೇ.100 ರಷ್ಟು ಸಾಕ್ಷರತೆ ಸಾಧಿಸಿದ ರಾಷ್ಟ್ರ. ಅಲ್ಲಿನ ಶಿಕ್ಷಣ ವ್ಯವಸ್ಥೆ, ವೈದ್ಯಕೀಯ ವ್ಯವಸ್ಥೆ, ಕೃಷಿ ಕ್ರಾಂತಿ ಇಂದಿಗೂ ಜಗತ್ತಿಗೆ ಮಾದರಿ. ಸಂಪೂರ್ಣ ಸಾಕ್ಷರತೆ ಸಾಧಿಸಲು ಮೊದಲು ಕ್ಯೂಬಾದ ಎಲ್ಲ ವಿಶ್ವವಿದ್ಯಾಲಯಗಳನ್ನು ಬ್ಯಾನ್ ಮಾಡಿದರು. ಎಲ್ಲರಿಗೂ ಬಡವ, ಶ್ರೀಮಂತರೆಂಬ ಭೇದವಿಲ್ಲದೆ ಎಲ್ಲರಿಗೂ ಸಮಾನ ಹಾಗು ಉಚಿತ ಶಿಕ್ಷಣ ನೀಡಿದರು. ದೇಶದ ಎಲ್ಲಾ ನಾಗರೀಕರಿಗೆ ಉಚಿತ ವೈದ್ಯಕೀಯ ಸೇವೆ ನೀಡಿದರು.
ಇಂದು ಭಾರತದಲ್ಲಿ ನರೇಂದ್ರ ಮೋದಿಯವರು 500 ಹಾಗು 1000 ಸಾವಿರದ ನೋಟನ್ನು ಬ್ಯಾನ್ ಮಾಡಿ ಭ್ರಷ್ಟಾಚಾರ ತಡೆದು ಭಾರತವನ್ನು ಬಲಿಷ್ಠ ದೇಶವನ್ನಾಗಿ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಆದರೆ ಈ ಬ್ಯಾನ್ ನಿಂದ ಸಂಪೂರ್ಣ ಕಪ್ಪು ಹಣ ಹಾಗು ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ. ಯಾವುದೇ ಒಬ್ಬ ಸಾಮಾನ್ಯ ವ್ಯಕ್ತಿಗೆ ನೀನು ಹಣವನ್ನು ಏಕೆ ಕೂಡಿಡುತ್ತೀಯ ಎಂದು ವಿಚಾರಿಸಿದಲ್ಲಿ ಅವನು ಹೇಳೋದು, ‘ಮುಂದೆ ಖಾಯಿಲೆ ಕಸಾಲೆ ಬಂದ್ರೆ ಬೇಕಲ್ವ ಸರ್ ’, ಎಂದು ಇನ್ನು ಕೆಲವರು ಈ ಕಾಲದಲ್ಲಿ ಮಕ್ಕಳಿಗೆ ಓದಿಸಬೇಕಾದ್ರೆ ಬೇಕಲ್ವ  ಎಂದು ಹೇಳೋದು ಸಹಜ. ಹಾಗಂತ ಈ ಎರಡೇ ವಿಷಯಕ್ಕೆ ಮಾತ್ರ ಹಣ ಕೂಡಿ ಇಡೋದು ಅಂತ ಅಲ್ಲ. ಬೇರೆ ಬೇರೆ ಉದ್ದೇಶಗಳೂ ಇವೆ. ಆದರೆ ಇವು ಅತೀ ಮೂಲಭೂತ ಅಂಶಗಳು.
ಇಲ್ಲಿ ನಾನು ಹೇಳ ಬಯಸುವುದೇನೆಂದರೇ, ಮಾನ್ಯ ಪ್ರಧಾನಮಂತ್ರಿಗಳು ಭಾರತದಲ್ಲಿ ಎಲ್ಲಾ ಖಾಸಗೀ ಶಿಕ್ಷಣ ಸಂಸ್ಥೆಗಳನ್ನು ರಾಷ್ಟೀಕರಣಗೊಳಿಸಿ ಎಲ್ಲರಿಗೂ ಉಚಿತ ಶಿಕ್ಷಣ ನೀಡಬೇಕು. ಅಲ್ಲದೇ ದೇಶದ ಎಲ್ಲಾ ಆಸ್ಪತ್ರೆಗಳನ್ನು ರಾಷ್ಟೀಕರಣಗೊಳಿಸಿ ಎಲ್ಲರಿಗೂ ಉಚಿತ ವೈದ್ಯಕೀಯ ಸೇವೆ ನೀಡಬೇಕು. ನೋಟು ಬ್ಯಾನ್ ವಿಚಾರದಲ್ಲಿ ಕೈಗೊಂಡ ದಿಟ್ಟ ನಡೆಯಂತೆ ಈ ಎರಡು ವಿಚಾರದಲ್ಲಿ ಕೈ ಗೊಳ್ಳಬೇಕು. ಆಗಲೇ ಇನ್ನೋಂದೆರಡು ದಶಕಗಳಲ್ಲಿ ಭಾರತ ಜಗತ್ತಿನಲ್ಲೇ ಬಲಿಷ್ಠ ದೇಶವಾಗಲು ಸಾಧ್ಯ, ಅಲ್ಲದೇ ಉತ್ತಮ ಸುಶಿಕ್ಷಿತ ನಾಡಲ್ಲಿ ಭ್ರಷ್ಟಾಚಾರವು ಕಡಿಮೆಗೊಳ್ಳುತ್ತದೆ.

ಕ್ಯೂಬಾ ದೇಶದಲ್ಲಿ ಕೈಗೊಂಡ ಇಂತಹ ದಿಟ್ಟ ನಡೆಯಿಂದ ಜಗತ್ತಿನ ದೊಡ್ಡಣ್ಣ ಎಂದು ಕರೆಯಿಸಿಕೊಳ್ಳುವ ಆಮೇರಿಕವೇ ಕ್ಯೂಬಾಕ್ಕೆ ಹೆದರುತ್ತದೆ. ಇಂತಹ ದಿಟ್ಟ ನಡೆ ಭಾರತದಲ್ಲೂ ಅವಶ್ಯಕತೆ ಇದೆ. ಇಂತಹ ದಿಟ್ಟ ನಾಯಕರು ಭಾರತಕ್ಕೆ ಬೇಕಾಗಿದ್ದಾರೆ. ನಾನು ಎಡಪಂತೀಯ , ಬಲಪಂತೀಯನಲ್ಲ  ಮೊದಲು ನಾನೋಬ್ಬ ಭಾರತೀಯ. ಪಕ್ಷಾತೀತವಾಗಿ ಎಲ್ಲರೂ ಈ ವಿಚಾರವನ್ನು ಶೇರ್ ಮಾಡಿ , ಇದು ಇಂದಿನ ಪ್ರಧಾನ ಮಂತ್ರಿಯವರಿಗೂ ತಲುಪಲಿ, ಭವ್ಯ ಭಾರತ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಿ. ಕೊನೆಯದಾಗಿ  ಹ್ಯಾಟ್ಸ್ ಆಫ್ ಫಿಡಲ್ ಕ್ಯಾಸ್ಟ್ರೋ . ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ.

No comments:

Post a Comment